ಶಿಕ್ಷಕರೇ ಸಮಾಜದ ಬೆನ್ನೆಲುಬು: ಶರತ್ ಗೋರೆ

ವೈಬ್ರೆಂಟ್ ಸಿ ನ್ ಎಂ ಕಾಲೇಜಿನಲ್ಲಿ ೭೬ ಶಿಕ್ಷಕರಿಗೆ ಸನ್ಮಾನ

ಮೈಸೂರು: ರಾಷ್ಟ್ರದ ಹಲವಾರು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿದ ಸಮಾನ ಮನಸ್ಸಿನ ಆರು ಉಪನ್ಯಾಸಕರು ಕಟ್ಟಿ ಬೆಳೆಸಿದ ಸಂಸ್ಥೆ ವೈಬ್ರೆಂಟ್ ವಿದ್ಯಾಸಂಸ್ಥೆ,ಮೊದಲ ವರ್ಷದಲ್ಲೇ ವಿಜ್ಞಾನ ವಿಭಾಗದ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ನಡೆಸಿದ ವೈದ್ಯಕೀಯ ಅರ್ಹತಾ ಪರೀಕ್ಷೆಯಲ್ಲಿ 250 ವಿದ್ಯಾರ್ಥಿಗಳಲ್ಲಿ 151 ವಿದ್ಯಾರ್ಥಿಗಳು ಸರಕಾರಿ ವೈದ್ಯಕೀಯ ಸೀಟನ್ನು ಪಡೆದಿರುವುದು ಐತಿಹಾಸಿಕ ದಾಖಲೆಯು ಹೌದು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪಿಯು ವಿದ್ಯಾಭ್ಯಾಸದ ಜೊತೆ ಜೊತೆಗೆ ವಿದ್ಯಾರ್ಥಿಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ಅಣಿಗೊಳಿಸುತ್ತಿರುವ ಸಂಸ್ಥೆ ಮೂಡುಬಿದ್ರೆಯ ವೈಬ್ರೆಂಟ್ ವಿದ್ಯಾಸಂಸ್ಥೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿರುವ ವೈಬ್ರೆಂಟ್ ಸಿ. ಎನ್. ಎಂ. ಪಿ ಯು ಕಾಲೇಜಿಗೆ ಎರಡು ವರುಷದ ಸಂಭ್ರಮದ ಅಂಗವಾಗಿ ಗುರುವಂದನಾ ಕಾರ್ಯಕ್ರಮವನ್ನು ಆಯೋಜಿಸಲಾಯಿತು.
ಕಾರ್ಯಕ್ರ್ರಮದಲ್ಲಿ ವೈಬ್ರೆಂಟ್ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಗಳಾದ ಶ್ರೀಯುತ ಶರತ್ ಗೋರೆ ಮಾತನಾಡಿ, “ಗುರು ವಿದ್ಯಾರ್ಥಿಯ ಜೀವನವನ್ನು ಯಶಸ್ವಿ ಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಾರೆ. ಅಂತಹ ಗುರುಗಳನ್ನು ಗೌರವಿಸುವುದು ನಮ್ಮ ಕರ್ತವ್ಯ. ನಮ್ಮ ಸಂಸ್ಥೆಯು ಇಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಆಯೋಜಿಸುತ್ತಿದೆ. ಗುರುಗಳಾಗಿ ನೀವು ಸಲ್ಲಿಸಿದ ಸೇವೆ ದೊಡ್ಡದು ಎಂದು ಎಲ್ಲಾ ಗುರುಗಳಿಗೂ ಅಭಿನಂದನೆಯನ್ನು ಸಲ್ಲಿಸಿದರು”.


ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸಿ ಸಾಧನೆಗೈದ ಸುಮಾರು 76 ಶಿಕ್ಷಕರನ್ನು ಸನ್ಮಾನಿಸಲಾಯಿತು. ಸನ್ಮಾನಿತರು ತಮ್ಮ ಅನಿಸಿಕೆಯನ್ನ ಹಂಚಿ ಕೊಂಡರು. ಕಾರ್ಯಕ್ರಮದಲ್ಲಿ ವೈಬ್ರೆಂಟ್ ಸಿ.ಎನ್.ಎಂ. ಪಿ ಯು ಕಾಲೇಜಿನ ಆಡಳಿತ ಅಧಿಕಾರಿ ಶಾರದಾಪ್ರಸಾದ್, ಪ್ರಾಂಶುಪಾಲರಾದ ನಾಗೇಶ್, ಉಪ ಪ್ರಾಂಶುಪಾಲರಾದ ಡಾ.ರಾಜೀವ್ ಉಪಸ್ಥಿತರಿದ್ದರು. ಪ್ರಖ್ಯಾತ್ ಬೆಳ್ವಾಯಿ ಸ್ವಾಗತಿಸಿ, ಉಪನ್ಯಾಸಕ ಡಾ. ರಾಜೀವ್ ವಂದಿಸಿ ಉಪನ್ಯಾಸಕ ನಿಕೇತ್ ಮೋಹನದಾಸ್ ಶೆಟ್ಟಿ ಕಾರ್ಯಕ್ರಮ ವನ್ನು ನಿರೂಪಿಸಿದರು.

Leave a comment